ಕೆನಡಾ ದೇಶದ ಪ್ರಜೆ ಟೆರಿ ಫಾಕ್ಸ್ ಗೆ ಕ್ರೀಡೆಯೇ ಜೀವನವಾಗಿತ್ತು. ಅದರಲ್ಲೂ ಓಟ ಎಂದರೆ ಆತನಿಗೆ ಪಂಚಪ್ರಾಣ. ಮುಂದೆ ಒಂದು ದಿನ ಇದರಲ್ಲಿ ಪರಿಣಿತಿ ಪಡೆದು ಒಲಂಪಿಕ್ ಆಟಗಾರ ಆಗುವುದು ಆತನ ಗುರಿ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಆತ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಹೀಗಾದರೂ ಆತ ಛಲ ಬಿಡಲಿಲ್ಲ . ಜಗತ್ತಿಗೆ ಮಾದರಿಯಾಗಿ ಬೆಳೆದ. ಹಾಗಾದರೆ ಟೆರಿ ಫಾಕ್ಸ್ ಬದುಕಿನ ಕಥೆ ಏನು ಎಂಬ ರೋಚಕ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.