ಶ್ರೀರಾಮನ ಅವತಾರ ಸಮಾಪ್ತಿ ಆಗುವ ಸಂದರ್ಭ. ಕಾಲನು ರಾಮನನ್ನು ಕಾಣಲು ಬಂದ. ಕಾಲನೊಂದಿಗೆ ರಹಸ್ಯ ಮಾತುಕತೆ ಕಾರಣ, ಯಾರನ್ನೂ ಕೋಣೆಯೊಳಗೆ ಬಿಡಬಾರದು ಎಂದು ಶ್ರೀರಾಮ, ಲಕ್ಷ್ಮಣನಿಗೆ ಕಟ್ಟಾಜ್ಞೆ ವಿಧಿಸಿದ. ಅದೇ ವೇಳೆ ದೂರ್ವಾಸ ಮುನಿಗಳು ರಾಮನನ್ನು ಕಾಣಲು ಬಂದರು. ಲಕ್ಷ್ಮಣ ಪ್ರವೇಶ ನಿರಾಕರಿಸಿದಾಗ, ದೂರ್ವಾಸರಿಗೆ ಬ್ರಹ್ಮಾಂಡ ಕೋಪ ಬಂತು. ಮುಂದೇನಾಯ್ತು? ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ