ದಟ್ಟ ಕಾಡಿನ ಗರ್ಭದಲ್ಲಿ ಒಂದು ವಿಶಾಲವಾದ ಕೊಳವಿತ್ತು, ಆ ಕೊಳದ ತೀರದಲ್ಲಿ ಹರವಾಗಿ ಬೆಳೆದ ಒಂದು ಅಂಜೂರದ ಮರವಿತ್ತು ಅದರ ನೆರಳಿನಲ್ಲಿ ಪ್ರಾಣಿ ಪಕ್ಷಿಗಳು ವಿಶ್ರಾಂತಿ ಪಡೀತಾ ಇದ್ವು.. ರಸಭರಿತ ಸ್ವಾದಿಷ್ಟ ಹಣ್ಣುಗಳನ್ನ ತಿನ್ತಾ ಇದ್ವು ಅದು ಅವರಿಗೆ ಆಹಾರ ಆಗ್ತಾ ಇತ್ತು ಹಣ್ಣಿನ ರುಚಿಯ ಬಗ್ಗೆ ಕೇಳಿದ ಪ್ರಾಣಿಗಳು ದೂರ ದೂರದಿಂದ ಆ ಮರ ಹಣ್ಣು ಬಿಡುವ ಕಾಲದಲ್ಲಿ ಅಲ್ಲಿ ತಂಡ ತಂಡವಾಗಿ ಬರ್ತಾ ಇದ್ವು ಒಂದು ಬಿರು ಬೇಸಿಗೆಯ ಮದ್ಯಾಹ್ನ ಒಂದು ಆನೆ ಆ ದಾರಿಯಾಗಿ ಬಂತು.. ಆಮೇಲೇನಾಯ್ತು ಕೇಳಿ