ಇದೊಂದು ಸತ್ಯಕಥೆ. ಸಮಾಜ ಸೇವಕಿಯೋರ್ವಳ ಹತ್ತಿರ ವ್ಯಕ್ತಿಯೊಬ್ಬ ವೃದ್ಧರೊಬ್ಬರನ್ನು ಕೆರೆತಂದು ಇವರಿಗೆ ಯಾರೂ ಇಲ್ಲವೆಂದು ಯಾವುದಾದರೂ ವೃದ್ಧಾಶ್ರಮ ಸೇರಿಸಬೇಕು ಎಂದ. ಹೀಗೆ ಬಂದು ಆ ವೃದ್ಧನನ್ನು ಬಿಟ್ಟು ಹೋದ ಕೆಲವು ದಿನದ ಬಳಿಕ ಆ ವೃದ್ಧ ತೀರಿಹೋದ. ವಿಷಯ ತಿಳಿದ ಸಮಾಜ ಸೇವಕಿ ವೃದ್ಧನ ಶವ ನೋಡಲು ಬಂದಾಗ ಈ ಹಿಂದೆ ವೃದ್ಧನನ್ನು ತಂದು ಬಿಟ್ಟ ವ್ಯಕ್ತಿ ಅಲ್ಲಿ ಗೋಳಾಡುತ್ತಿದ್ದ. ವಿಷಯ ಕೆಳಿದಾಗ ವೃದ್ಧ ಆ ವ್ಯಕ್ತಿಯ ತಂದೆಯಾಗಿದ್ದ. ಆ ವ್ಯಕ್ತಿ ತನ್ನ ತಂದೆಯ ಮೇಲೆ ಅಷ್ಟು ಪ್ರೀತಿ ಇದ್ದರೂ ಆತನನ್ನು ಯಾಕಾಗಿ ವೃದ್ಧಾಶ್ರಮ ಸೇರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.